ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಅಶ್ವಮೇಧದ ಕುದುರೆಯನ್ನು ರಾಮನಗರದಿಂದಲೇ ಕಟ್ಟಿಹಾಕುತ್ತೇವೆ ಎನ್ನುವ ಮೂಲಕ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಜೆಡಿಎಸ್ ಗೆ ಟಾಂಗ್ ನೀಡಿದ್ದಾರೆ.
ರಾಮನಗರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಸಂಬಂಧ ಸಭೆ ನಡೆಸಿ ಮಾತನಾಡಿದ ಸದಾನಂದಗೌಡ,
ರಾಮನಗರದಲ್ಲಿ ಬಿಜೆಪಿ ಪತಾಕೆ ಹಾರಿಸಿ ರಾಜ್ಯ ರಾಜಕಾರಣಕ್ಕೆ ಹೊಸ ತಿರುವು ನೀಡಲು ತೀರ್ಮಾನ ಮಾಡಿದ್ದೇವೆ ಬಿಜೆಪಿ ಈ ಭಾಗದಲ್ಲಿ ತುಂಬಾ ದುರ್ಬಲ ಎಂಬುದು ನಾವು ಮನಗಂಡಿದ್ದೇವೆ ಬೂತ್ ಕಮಿಟಿ ರಚನೆ ಮಾಡಿ ಪ್ರತಿ ಬೂತ್ ಸದಸ್ಯರಿಗೆ ೨೦ ಮನೆಗಳ ಜವಾಬ್ದಾರಿ ಕೊಡ್ತೇವೆ ಎಂದ್ರು.
ನಿನ್ನೆ ಸಚಿವ ಮಹೇಶ್ ರಾಜೀನಾಮೆ ಕೊಟ್ಟಿರೋದು ನೋಡಿದ್ದೇವೆ ಮಹೇಶ್ ರಂಗಸ್ಥಳದಲ್ಲಿ ಇದ್ದಾರೆ, ಆದರೆ ಅವರಿಗೆ ನಾಟ್ಯ ಗೊತ್ತಿಲ್ಲದ ಕಾರಣ ಅವರನ್ನು ಬದಿಗೆ ಸರಿಸಲಾಗಿದೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಉಸ್ತುವಾರಿಗಳು ಮೀಟಿಂಗ್ ಮಾಡಿದರೆ ಆರು ಕಾಂಗ್ರೆಸ್ ಶಾಸಕರಲ್ಲಿ ನಾಲ್ಕು ಶಾಸಕರು ಗೈರು ಮಂಡ್ಯದಲ್ಲಿ ಕಾಂಗ್ರೆಸ್ ನ ಅತೃಪ್ತ ಗುಂಪು ಇದೆ
ಎಲ್ಲಿ ಸಹಮತ, ಎಲ್ಲಿ ಭಿನ್ನಮತ ಎಂದು ಹುಡುಕಾಟ ಮಾಡಬೇಕಾದ ದಯನೀಯ ಸ್ಥಿತಿ ಸರ್ಕಾರದಲ್ಲಿ ಇದೆ ರಾಜ್ಯವ್ಯಾಪಿ ಬಿಜೆಪಿ ಕಡೆ ವಿಶೇಷ ಒಲವು ಕಂಡು ಬರುತ್ತಿದೆ ಎಂದ್ರು.
ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತೆ ಬರಬೇಕು ಎಂಬ ಅಭಿಪ್ರಾಯ ಮೂಡಿ ಬರುತ್ತಿದೆ ಈ ಕೆಲಸ ಮುಖ್ಯಮಂತ್ರಿಗಳ ಕಾರ್ಯಕ್ಷೇತ್ರದಿಂದಲೇ ಆರಂಭವಾಗುವ ವಿಶ್ವಾಸವಿದೆ.ನಾವು ರಣಾಂಗಣಕ್ಕೆ ಇಳಿದಿದ್ದೇವೆ, ಅವರ ಅಶ್ವಮೇಧದ ಯಾವ ಕುದುರೆ ಬಂದರೂ ಕೂಡಾ ಕಟ್ಟಿ ಹಾಕುತ್ತೇವೆ ಬಿಜೆಪಿಗೆ ಬರುವವರ ದೊಡ್ಡ ಪಟ್ಟಿಯೇ ಇದೆ ಒಂದೊಂದೇ ಬ್ರೇಕಿಂಗ್ ನ್ಯೂಸ್ ಕೊಡುತ್ತೇವೆ ರಾಜ್ಯಾಧ್ಯಕ್ಷರಿಗೆ ಅಭ್ಯರ್ಥಿ ಆಯ್ಕೆ ಕುರಿತು ವರದಿ ಕೊಡುತ್ತೇವೆ ಅಳೆದು ತೂಗಿ ಭಾನುವಾರ ಸಂಜೆ ಅಥವಾ ಸೋಮವಾರ ಬೆಳಗ್ಗೆ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತೇವೆ ಎಂದ್ರು.








