ಬೆಂಗಳೂರು: ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ,7 ಮಿನಿಸ್ಟರ್ ಮನೆ ಪಡೆಯಲು ಮತ್ತು ಕಾರಿನಲ್ಲಿ ಒಡಾಡಲು ನನ್ನ ಕೊಡುಗೆ ಇದೆ ಎಂದು ರೇಣುಕಾಚಾರ್ಯ ವಿರುದ್ಧ ಹೇಳಿಕೆ ನೀಡಿದ್ದ ಯೋಗೇಶ್ವರ್ ಗೆ ರೇಣುಕಾಚಾರ್ಯ ವ್ಯಂಗ್ಯವಾಗಿ ಟೀಕಿಸಿದ್ದಾರೆ.
ಯೋಗೇಶ್ವರ್ ಅವರಿಗೆ ಆ ಪುಣ್ಯಾತ್ಮ ಎಂದು ಹೆಸರು ಹೇಳದೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ,ಅವರು ನಮ್ಗೆ ಜಗದ್ಗುರುಗಳಿದ್ದ ಹಾಗೇ, ನಮ್ಮ ಕ್ಷೇತ್ರದ ಅಭಿವೃದ್ಧಿಯಾಗಿದೆ ಅಂದ್ರೆ ನಾನು ಶಾಸಕನಾಗಿದ್ದೇನೆ ಅಂದ್ರೆ, ಹಿಂದೆ ಅಬಕಾರಿ ಸಚಿವನಾಗಿದ್ದೇನೆ ಅಂದ್ರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ ಅಂದ್ರೆ ಅದಕ್ಕೆಲ್ಲ ಆ ಜಗದ್ಗುರುಗಳೇ ಕಾರಣ..
ಪಕ್ಷ ಕಟ್ಟುವಲ್ಲಿ ಅವರ ಪಾತ್ರ ಬಹಳಷ್ಟು ದೊಡ್ಡದಿದೆ..ಹೀಗಾಗಿ ಅವರು ತುಂಬಾ ದೊಡ್ಡವರು.ಅವರ ಆಶೀರ್ವಾದಿಂದ 7 ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿದ್ದೇನೆ.ಅವರ ಮೇಲೆ ಟೀಕೆ ಮಾಡಿದ್ರೆ ಅವರ ಮೂರನೇ ದೃಷ್ಟಿ ನನ್ನ ಮೇಲೆ ಬಿಳುತ್ತೆ.
ಅವರ ಮೂರನೇ ಕಣ್ಣು ಬಿಟ್ಟರೆ ನಾನು ಭಸ್ಮವಾಗಿ ಬಿಡುತ್ತೇನೆ.ಅವರ ಆಶೀರ್ವಾದದಿಂದ ನಾನು ಕಾರಿನಲ್ಲಿ ಒಡಾಡುತ್ತಿದ್ದೇನೆ.ಅವರನ್ನ ನಾನು ಪರಮಾತ್ಮ ಸ್ಥಾನದಿಂದ ನೋಡುತ್ತಿದ್ದೇನೆ.ಹೀಗಾಗಿ ಅವರ ಕೆಂಗಣ್ಣಿಗೆ ಗುರಿಯಾಗಲು ನಾನು ಇಷ್ಟಪಡುವುದಿಲ್ಲ.ಮುಂದೆ ಸಹಾ ಅವರ ಆಶೀರ್ವಾದ ನಮ್ಮ ಮೇಲೆ ಇರಲಿ.ಆದ್ರೆ ಅವರಿಗೆ ಒಂದೇ ಒಂದು ಮಾತುಗಳನ್ನ ಹೇಳ್ತೀನಿ.ನಾವು ನಿಮ್ಮನ್ನ ಗುರುಗಳು ಅಂತ ಒಪ್ಪಿಕೊಳ್ಳುತ್ತೇನೆ ಆದ್ರೆ ಚನ್ನಪಟ್ಟಣದಲ್ಲಿ ಯಾಕೆ ಜನ ತಿರಸ್ಕರಿಸಿದರು ಇದ್ರ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ರು.








