ಬೆಂಗಳೂರು: ಕೊರೊನಾ ಸ್ಟೋಟದ ನಡುವೆ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಮೂವರು ಬಲಿಯಾಗಿದ್ದು ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿದೆ.ಆತಂಕದ ವಾತಾವರಣ ನಿರ್ಮಾಣವಾಗಿದ್ದು ಇಡೀ ನಗರದಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
ವಿವಾದಾತ್ಮಕ ಪೋಸ್ಟ್ ಖಂಡಿಸಿ ನಡೆದ ಡಿಜೆ ಹಳ್ಳಿ ಠಾಣೆ ಎದುರು ಕಳೆದ ರಾತ್ರಿ ನಡೆದ ಪ್ರತಿಭಟನೆ ನಂತರ ಗಲಭೆಗೆ ತಿರುವುತು. ಏಕಾಏಕಿ ನೂರಾರು ದುಷ್ಕರ್ಮಿಗಳು ಕಲ್ಕು ತೂರಾಟ ನಡೆಸಿದರು. ಪೊಲೀಸ್ ವಾಹನ ಸೇರಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೂ ಬೆಂಕಿ ಹಚ್ಚಿದ್ದು ಮನೆಯ ಕೆಳ ಮಹಡಿ ಸಂಪೂರ್ಣ ಸುಟ್ಟುಹೋಗಿದೆ.
ಮಧ್ಯರಾತ್ರಿಯಾದರೂ ಪರಿಸ್ಥಿತಿ ತಿಳಿಯಾಗದೆ ಕೈಮೀರಿದ್ದು ಪೊಲೀಸರ ವಿರುದ್ಧ ದುಷ್ಕರ್ಮಿಗಳು ಕಲ್ಲು ತೂರಾಟ, ಬಾಟಲಿ ತೂರಾಟ ನಡೆಸಿದ್ದು, ಪೊಲೀಸ್ ಠಾಣೆಯನ್ನು ಮುತ್ತಿಗೆಯ ಹಾಕಿದ್ದರು ಪೊಲೀಸರ ಪ್ರಾಣಕ್ಕೆ ಅಪಾಯ ಸನ್ನಿವೇಶ ನಿರ್ಮಾಣದ ನಂತರ ಅಶ್ರುವಾಯು ಪ್ರಯೋಗ, ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ದುಷ್ಕರ್ಮಿಗಳು ದುಷ್ಕೃತ್ಯ ಮುಂದುವರೆಸಿದರು ಇದರಿಂದ ಡಿಜೆ ಹಳ್ಳಿಯಲ್ಲಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿದ್ದು ಪೊಲೀಸರ ಜೀವಕ್ಕೂ ಅಪಾಯ ಎದುರಾಗಿತ್ತು ನಂತರ
ಕಡೆಯ ಅಸ್ತ್ರವಾಗಿ ಪೊಲೀಸರು ಗೋಲಿವಾರ್ ನಡೆಸಿದರು.
ಪೊಲೀಸರ ಗುಂಡಿಗೆ ಸ್ಥಳದಲ್ಲೇ ಓರ್ವ ಮೃತಪಟ್ಟರೆ,ಗಾಯಗೊಂಡಿದ್ದ ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವತ್ತಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗಲಭೆ ಸಂಬಂಧ 145 ,ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು ತನಿಖೆಯನ್ನು ಚುರುಕುಗೊಳಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.ನಗರದಾದ್ಯಂತೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.









