ಬೆಂಗಳೂರು:ನಟ ಸಾರ್ವಭೌಮ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆ ಇನ್ನೊಬ್ಬ ನಾಯಕ ನಟಿ ಇದ್ದಾರೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಬಹಿರಂಗಪಡಿಸಿದೆ.
ಯಸ್,ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸಾರ್ವಭೌಮ ಚಿತ್ರದ ಚಿತ್ರೀಕರಣ ಈಗಾಗಲೇ ಅರ್ಧದಷ್ಟು ಮುಗಿದಿದೆ.ನಾಯಕಿ ರಚಿತಾ ರಾಮ್ ಅಭಿನಯದ ಬಹುತೇಕ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಚಿತ್ರತಂಡ ಇದೀಗ ಹೊಸ ಟ್ವಿಸ್ಟ್ ಪ್ರಕಟಿಸಿದೆ.ಚಿತ್ರದಲ್ಲಿ ಇಬ್ಬರು ನಾಯಕಿಯರು ಎನ್ನುವ ಮಾಹಿತಿ ಹರಿಬಿಟ್ಟಿದೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆ ಮತ್ಯಾರು ನಾಯಕಿ ಎನ್ನುವುದನ್ನು ಚಿತ್ರತಂಡ ಸಸ್ಪೆನ್ಸ್ ಆಗಿ ಇರಿಸಿದೆ.ಈಗಾಗಲೇ ಎರಡನೇ ನಾಯಕಿಯ ಆಯ್ಕೆ ಪೂರ್ಣಗೊಂಡಿದ್ದು ಅವರ ಭಾಗದ ಚಿತ್ರೀಕರಣ ಆರಂಭವಾಗುವವರೆಗೂ ಆ ನಟಿಯ ಹೆಸರನ್ನೂ ಬಹಿರಂಗಪಡಿಸುವುದಿಲ್ಲ ಎಂದು ಚಿತ್ರತಂಡ ಹೇಳಿದೆ. ಹೀಗಾಗಿ ಡಿಂಪಲ್‌ಕ್ವೀನ್ ಗೆ ಈ ಚಿತ್ರದಲ್ಲಿ ಬರುವ ಕಾಂಪಿಟೇಟರ್ ಯಾರು ಎನ್ನುವ ಪ್ರಶ್ನೆ ಇದೀಗ ಗಾಂಧಿನಗರದಲ್ಲಿ ಸುಳಿದಾಡುತ್ತಿದೆ.









