ಪ್ರಕೃತಿ ಚಿಕಿತ್ಸಾ ಕೇಂದ್ರದ ಮೊರೆ ಹೋದ ಮಾಜಿ ಸಿಎಂ ಸಿದ್ದು

0
18

ಬೆಂಗಳೂರು: ಪ್ರಧಾನಿ ಮೋದಿ ಫಿಟ್ನೆಸ್ ಟೆಸ್ಟ್ ಗೆ ಸಿಎಂ ಕುಮಾರಸ್ವಾಮಿ,ಮಾಜಿ ಪಿಎಂ ದೇವೇಗೌಡ ಟಾಂಗ್ ನೀಡುತ್ತಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಸದ್ದಿಲ್ಲದೇ ಪ್ರಕೃತಿ ಚಿಕಿತ್ಸಾ ಕೇಂದ್ರದ ಮೊರೆ ಹೋಗುತ್ತಿದ್ದಾರೆ.

ಪಿಎಂ ಮೋದಿ ಫಿಟ್ನೆಸ್ ಟೆಸ್ಟ್ ದೇ ದೇಶಾದ್ಯಂತ ಸುದ್ದಿ,ಟ್ವಿಟ್ಟರ್ ವಾರ್ ಕೂಡ ನಾಯಕರ ನಡುವೆ ಶುರುವಾಗಿದೆ.ಸಿಎಂಗೆ ಫಿಟ್ನೆಸ್ ಚಾಲೆಂಜ್ ಹಾಕುತ್ತಿದ್ದಂತೆ ಮಾಜಿ ಪಿಎಂ ದೇವೇಗೌಡರ ಯೋಗಾಭ್ಯಾಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಪುತ್ರನ ಪರ ಗೌಡರಿಂದ ಮಾಜಿ ಪಿಎಂಗೆ ಉತ್ತರ ಎಂದೇ ಬಣ್ಣಿಸಲಾಗುತ್ತಿದೆ.

ಇಷ್ಟೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ‌ ಹಾಗು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಫಿಟ್ನೆಸ್ ಟೆಸ್ಟ್ ವಾರ್ ಗೂ ತಮಗೂ ಸಂಬಂಧವಿಲ್ಲ ಎನ್ನುತ್ತಾ ಸದ್ದಿಲ್ಲದೇ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳುತ್ತಿದ್ದಾರೆ.

ನಾಳೆ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದ ಮೂಲಕ ತೆರಳಿ ಅಕ್ಕಿಂದ ರಸ್ತೆ ಮಾರ್ಗವಾಗಿ ಧರ್ಮಸ್ಥಳ ತಲುಪಲಿದ್ದಾರೆ.12 ದಿನಗಳ ಕಾಲ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಿದ್ದರಾಮಯ್ಯ ಚಿಕಿತ್ಸೆ ಪಡೆಯಲಿದ್ದಾರೆ.

ರಾಜಕೀಯ ಜಂಟಜಾ,ಬಿಡುವಿಲ್ಲದ ಪ್ರವಾಸದಿಂದ ಬಳಲಿರುವ ಮಾಜಿ ಸಿಎಂ ಇದೀಗ ವಿಶ್ರಾಂತಿ ಬಯಸಿದ್ದು ಪ್ರಕೃತಿ ಚಿಕಿತ್ಸಾ ಕೇಂದ್ರದ ಮೊರೆ ಹೋಗಿದ್ದಾರೆ. ಜೂನ್ 28 ಅಥವಾ 29ರಂದು ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

- Call for authors -

LEAVE A REPLY

Please enter your comment!
Please enter your name here