ರಾಯಚೂರು: ಪರಿಶಿಷ್ಟ ಜಾತಿ ಹಾಗು ಪಂಗಡ ಅನುದಾನದ ಖರ್ಚು ಆಗುತ್ತಿಲ್ಲ ಎನ್ನುವುದು ಸರಿ ಅಲ್ಲ ಅನುದಾನ ಬಳಕೆಯಾಗುತ್ತಿದೆ. ಈಗಾಗಲೇ ಶೇಕಡಾ 93 ರಷ್ಟು ಅನುದಾನ ಬಳಕೆಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು,ವಿಶೇಷ ಘಟಕ ಯೋಜನೆಯಲ್ಲಿ ಹೆಚ್ಚು ಅನುದಾನ ಬಳಕೆ ಮಾಡಲಾಗುತ್ತಿದೆ.2013 ರಲ್ಲಿ ವಿಶೇಷ ಘಟಕದ ತಿದ್ದುಪಡಿ ಜಾರಿಗೆ ಬಂದ ನಂತರ ಏನಾಗಿದೆ ಎನ್ನುವದನ್ನು ಬಹಿರಂಗ ಪಡಿಸುತ್ತೇವೆ ಎಂದು ಅನುದಾನ ಬಳಕೆ ಕುರಿತ ಆರೋಪಕ್ಕೆ ತಿರುಗೇಟು ನೀಡಿದ್ರು.
ಸದಾಶಿವ ಆಯೋಗದ ವರದಿಯ ಬಗ್ಗೆ ಕಾನೂನು ಇಲಾಖೆಗೆ ಕಳುಹಿಸಿದ್ದೇವೆ.ಅಲ್ಲಿಂದ ಒಪ್ಪಿಗೆ ಬಂದ ನಂತರ ಜಾರಿಗೆ ನಿರ್ಧರಿಸುತ್ತೇವೆ. ಕೇಂದ್ರ ಸರಕಾರವು ಎಸ್ಸಿ ಎಸ್ಟಿ ಕಾಯ್ದೆ ವಿಧೇಯಕ ಜಾರಿಗೆ ತಂದಿದೆ.ಈಗಲಾದರೂ ಕೇಂದ್ರ ಸರಕಾರಕ್ಕೆ ಅನುಭವವಾಯಿತಲ್ಲ.ದಲಿತ ಸಂಘಟನೆಗಳ ಹೋರಾಟದಿಂದಾಗಿ ಹತ್ತು ದಿನಗಳಲ್ಲಿ ವಿಧೇಯಕಕ್ಕೆ ತಿದ್ದುಪಡಿ ತಂದಿದೆ ಎಂದ್ರು.
ರಾಜ್ಯದಲ್ಲಿರುವ ಎಲ್ಲಾ ಹಾಸ್ಟೆಲ್ ಗಳಲ್ಲಿ ಒಂದೇ ರೀತಿ ಸ್ಟಾಂಡರ್ಡ್ ಗೆ ತರಲು ಸಮಿತಿ ರಚಿಸಲಾಗಿದೆ.ಸಮಿತಿ ಸೂಕ್ತ ರೀತಿಯ ಶಿಫಾರಸ್ಸು ಮಾಡಲಿದ್ದು ಅದರಂತೆ ಸರಕಾರ ಕ್ರಮ ಕೈಗೊಳ್ಳಲಿದೆ.ಬಡ್ತಿ ಮೀಸಲಾತಿ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ ಅದು ತೀರ್ಪು ಬಂದ ನಂತರ ತೀರ್ಮಾನವಾಗುತ್ತೆ ಎಂದ್ರು.
ಉತ್ತರ ಕರ್ನಾಟಕ ಹೈದ್ರಾಬಾದ್ ಕರ್ನಾಟಕದವರು ಕಷ್ಟ ಪಟ್ಟು ಒಂದಾಗಿದ್ದೇವೆ.ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕಿಲ್ಲ.ಪ್ರತ್ಯೇಕ ರಾಜ್ಯ ಕೇಳಿದವರು ರಾಜ್ಯಕ್ಕಾಗಿ ಬೆವರು ಸುರಿಸಿದವರಲ್ಲ.ಅವರಿಗೆ ರಾಜ್ಯ ಒಗ್ಗೂಡಲೂ ಮಾಡಿದ ಪ್ರಯತ್ನ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ರು.









