ಬೆಂಗಳೂರು:ಕೊರೋನ ಫಾರ್ಮಸಿ ಸಚಿವನಾಗಿ ನನ್ನ ಜವಾಬ್ದಾರಿ ಹೆಚ್ಚಿದೆ. ದಿಲ್ಲಿಯಿಂದಲೇ ರಾಜ್ಯದ ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದೆ ವಸ್ತುಸ್ಥಿತಿ ಅರಿಯಲು ಸ್ವತಃ ಸಭೆ ನಡೆಸಿದ್ದೇನೆ ಕರೋನ ನಿಯಂತ್ರಣ ಮಾಡುವಲ್ಲಿ ಕರ್ನಾಟಕ ಯಶಸ್ಸು ಕಂಡಿದೆ ಅದ್ಭುತ ಪ್ರಯತ್ನ ನಮ್ಮಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ (ಫಾರ್ಮಸಿ ಒಳಗೊಂಡಂತೆ) ಡಿ ವಿ ಸದಾನಂದ ಗೌಡ ಅವರು ಕೋವಿಡ್-19ಕ್ಕೆ ಸಂಬಂಧಿಸಿದಂತೆರಾಜ್ಯದ ಸಚಿವರುಗಳು, ಶಾಸಕರು, ಅಧಿಕಾರಿಗಳ ಜತೆ ವಿಕಾಸ ಸೌಧದಲ್ಲಿ ಸಭೆ ನಡೆಸಿದರು.
ಸಭೆ ನಂತರ ಮಾತನಾಡಿದ ಸಚಿವರು ಕರ್ನಾಟಕಕ್ಕೆ ಹೊಸ ರಾಜ್ಯ ಮತ್ತು ದೇಶದಿಂದ ಬಂದು ಕ್ವಾರಂಟೈನ್ ನಲ್ಲಿ ಇರುವವರಿಂದ ಪ್ರಕರಣ ಬೆಳಕಿಗೆ ಬರುತ್ತಿದೆ
ರಾಜ್ಯದಲ್ಲಿ ದಾಖಲಾಗಿರುವ 800ರಿಂದ 900 ಪ್ರಕರಣಗಳು ಬೇರೆ ರಾಜ್ಯದಿಂದ ಇಲ್ಲಿಗೆ ಬಂದವರೇ ಆಗಿದ್ದಾರೆ ಕೊರೋನ ನಿಯಂತ್ರಣ ಮಾಡುವಲ್ಲಿ ಬೆಂಗಳೂರು ಎಲ್ಲ ಮಹಾನಗರಕ್ಕೆ ಹೋಲಿಸಿದರೆ ನಂ.1 ಸ್ಥಾನದಲ್ಲಿ ಇದೆ ಡಾ.ಮಂಜುನಾಥ್ ಮತ್ತು ತಂಡಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ರಾಜ್ಯದಲ್ಲಿ ಟೆಸ್ಟಿಂಗ್ ಲ್ಯಾಬ್ ಹೆಚ್ಚಾಗಿದೆ. ಕರೋನ ಪರೀಕ್ಷೆಗಳ ಪ್ರಮಾಣವೂ ಹೆಚ್ಚಿದೆ. ಹೈಡ್ರೊಕ್ಲೊರೋಕ್ವಿನ್, ಪ್ಯಾರಾಸಿಟಮಾಲ್ ಮಾತ್ರೆಗಳೂ ಅಗತ್ಯಕ್ಕಿಂತ ಹೆಚ್ಚಿದೆ ಎಂದರು.
ವಲಸಿಗರನ್ನು ಅವರ ರಾಜ್ಯಕ್ಕೆ ಕಳುಹಿಸಲು ರಾಜ್ಯ ಸಿದ್ದ ಇದೆ. ಆದ್ರೆ ಆಯಾ ರಾಜ್ಯಗಳೂ ಇವರನ್ನು ಬಿಟ್ಟುಕೊಳ್ಳಲು ಒಪ್ಪಬೇಕು ಹೀಗಾಗಿ ಒಂದಷ್ಟು ಗೊಂದಲ ಇದೆ ರಸಗೊಬ್ಬರದ ದಾಸ್ತಾನು ಸಹ ಅಗತ್ಯದ ಪ್ರಮಾಣದಲ್ಲಿ ಇದೆ ಪಿಪಿಒ ಕಿಟ್ ಗಳು ಅಗತ್ಯವಾದಷ್ಟು ಇದೆ ಅಂತ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ಹೋಟೆಲ್ ಗಳನ್ನು ತೆರೆಯಬೇಕು ಎಂಬ ಬೇಡಿಕೆಯೂ ಇದೆ ಈ ಬಗ್ಗೆ ಕೇಂದ್ರದ ಜತೆ ಮಾತನಾಡಿ ಕೂಡಲೆ ವ್ಯವಸ್ಥೆ ಮಾಡಿಸುತ್ತೇನೆ ಎಂದರು.









