ಬೆಂಗಳೂರು: ಜಲಪ್ರಳಯದಿಂದ ತತ್ತರಿಸಿರುವ ಕೊಡವರ ನೆರವಿಗೆ ಸ್ಯಾಂಡಲ್ ವುಡ್ ಸ್ಪಂಧಿಸಿದೆ.ಚಂದನವನದ ತಾರೆಯರ ಕರೆಗೆ ಓಗೊಟ್ಟು ಜನರು ಅಗತ್ಯ ವಸ್ತುಗಳನ್ನು ಕಳಿಸಿದ್ದು ಜನತೆಗೆ ತಾರೆಯರು ಕೃತಜ್ಞತೆ ಸಲ್ಲಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಸಂಭವಿಸಿದ ನೆರೆಯಲ್ಲಿ ಸಂತ್ರಸ್ತರಾದ ಜನರಿಗೆ ಸ್ಯಾಂಡಲ್ ವುಡ್ ಪರೋಕ್ಷವಾಗಿ ನೆರವು ನೀಡಿದೆ.ನೆರೆ ಹಾವಳಿಯಿಂದ ಜನ ಬೀದಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಕಿಚ್ಚ ಸುದೀಪ್,ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ನಟಿ ಹರ್ಷಿಕಾ ಪೂಣಚ್ಚ ಸೇರಿದಂತೆ ಸಿನಿ ತಾರೆಯರು ಸಾಮಾಜಿಕ ಜಾಲತಾಣದ ಮೂಲಕ ಕೊಡಗು ಜನರ ಕಷ್ಟಕ್ಕೆ ಸ್ಪಂಧಿಸಿ ಅಗತ್ಯ ವಸ್ತುಗಳನ್ನು ಕೈಲಾದ ಮಟ್ಟದಲ್ಲಿ ನೀಡಿ ಎಂದು ಅಭಿಮಾನಿಗಳಿಗೆ ಜನತೆಗೆ ಕರೆ ನೀಡಿದ್ದರು.ತಾರೆಯರ ಕರೆಗೆ ಸ್ಪಂಧಿಸಿದ್ದಾರೆ.
ಕಿಚ್ಚ ಫೌಂಡೇಶನ್ ಮೂಲಕ ಸುದೀಪ್ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕೊಡಗಿಗೆ ರವಾನಿಸಿದ್ದಾರೆ.ದರ್ಶನ್, ಪುನೀತ್ ಅಭಿಮಾನಿಗಳು ಕೂಡ ಬಟ್ಟೆಗಳು,ಔಷಧಿಗಳು,ತಿನಿಸುಗಳನ್ನು ಕಳುಹಿಸಿಕೊಟ್ಟಿದ್ದು ಸಂತ್ರಸ್ತರಿಗೆ ನೆರವು ನೀಡಿದ ಎಲ್ಲರಿಗೂ ಟ್ವಿಟ್ಟರ್ ಮೂಲಕ ನಟರು ಧನ್ಯವಾದ ಅರ್ಪಿಸಿದ್ದಾರೆ.









