ಬೆಂಗಳೂರು, ಫೆ.19– ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆಗೆ ಸಂಬಂಧಪಟ್ಟಂತೆ ಯಾರು ಯಾರ ಬಳಿಯೂ ಭಿಕ್ಷೆ ಬೇಡುವ ಅಗತ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸರ್ಕಾರ ಮೈತ್ರಿಯಲ್ಲಿದೆ. ಯಾರಿಗೆ ಯಾರು ಬೆಗರ್ಸ್ ಅಲ್ಲ. ಅವರು ಭಿಕ್ಷಕರಲ್ಲ, ನಾವು ಭಿಕ್ಷಕರಲ್ಲ ಎಂದಿದ್ದಾರೆ.
ನಿನ್ನೆ ಚುನಾವಣೆ ಸಂಬಂಧ ಸಭೆ ನಡೆದಿದೆ. ಯಾವುದನ್ನು ಫೈನಲ್ ಮಾಡಿಲ್ಲ. ಆದರೆ ಕಾಂಗ್ರೆಸ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಹತ್ತು ಸ್ಥಾನಗಳನ್ನು ಬಿಟ್ಟುಕೊಡಬಾರದು, ಅದರಲ್ಲಿ ರಾಜಿ ಆಗಬಾರದು ಎಂಬುದಾಗಿದೆ ಎಂದು ಹೇಳಿದರು.
ಯೋಧರ ಹತ್ಯೆ ಪ್ರಕರಣದಲ್ಲಿ ರಾಷ್ಟ್ರ ವಿರೋಧಿ ಹೇಳಿಕೆ ಕೊಟ್ಟವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಈಶ್ವರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,
ಯಾರೇ ಆದರೂ ರಾಷ್ಟ್ರ ವಿರೋಧಿ ಹೇಳಿಕೆ ನೀಡಬಾರದು. ಒಂದು ವೇಳೆ ಯಾರೇ ಹೇಳಿಕೆ ಕೋಟ್ರು ಕ್ರಮ ಕೈಗೊಳ್ಳಬೇಕು ಎಂದರು.









