ಬೆಂಗಳೂರು:ಬವೇರಿಯಾ ಪ್ರತಿನಿಧಿಯಾದ ವೋಲ್ಕ್ ರ್ ಹಾಗೂ ಅವರ ತಂಡ ವಿಧಾನಸೌಧಕ್ಕೆ ಆಗಮಿಸಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಪೊಲೀಸ್ ಸಿಬ್ಬಂದಿಗೆ ತರಬೇತಿ ಕೊಡುವ ಕುರಿತ ಚರ್ಚಿಸಿದರು.
ಇದೇ ನವೆಂಬರ್ ತಿಂಗಳಲ್ಲಿ ಬೆಳಗಾವಿ ಭಾಗದಲ್ಲಿ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಮೈಸೂರಿನಲ್ಲಿ ತರಬೇತಿ ನೀಡಿದ್ದೆವು. ಅದೇ ಮಾದರಿಯಲ್ಲಿ ಈಗ ಬೆಳಗಾವಿನಲ್ಲಿ ತರಬೇತಿ ನೀಡಲಾಗುವುದು ಎಂದು ಬವೇರಿಯಾ ಪ್ರತಿನಿಧಿ ವೋಲ್ಕ್ ರ್ ಹೇಳುದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವುದು ಸ್ವಾಗತಾರ್ಹ. ಜತೆಗೆ, ಮಹಿಳಾ ಸುರಕ್ಷತೆಗೂ ಸಹ ನಿಮ್ಮ ತಂಡ ಕೊಡುಗೆ ನೀಡಬೇಕು. ಪೊಲೀಸ್ ಠಾಣೆ ಹೆಚ್ವಿಸುವುದು, ಪೊಲೀಸ್ ಫೋರ್ಸ್‌ನಲ್ಲಿ ಶೇ. ೨೦ ರಷ್ಟು ಫೋರ್ಸ್ ಮಹಿಳಾ ಪೊಲೀಸ್ ಇರುವಂಥೆ ತಯಾರು ಮಾಡಬೇಕಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿದರೆ ಒಳಿತು ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಬವೇರಿಯಾ ತಂಡ, ಮುಂದಿನ ಬಾರಿ ಈ ಬಗ್ಗೆಯೂ ಪ್ರಸ್ತಾವನೆ ತರಲಿದ್ದೇವೆ ಎಂದರು.









