ಬೆಂಗಳೂರು: ಹನ್ನೆರಡು ವರ್ಷದ ಬಾಲಕನೊಬ್ಬ ಈಗ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದಾನೆ. ಇದು ಹೇಗೆ ಅಂತಾ ಯೋಚಿಸ್ತೀದ್ದೀರಾ ಹಾಗಾದ್ರೆ ಈ ಸ್ಟೋರಿ ಓದಿ.
ಚಿಂತಾಮಣಿ ಮೂಲದ ಸುಜಾತ ಮುನಿರಾಜು ದಂಪತಿ ಪುತ್ರನಾದ ಶಶಾಂಕ್‌ಗೆ ಪೊಲೀಸ್ ಇನ್ಸ್‌ಪೆಕ್ಟರ್ ಆಗುವ ಕನಸು. ಆದರೆ, ಆತನ ಆರೋಗ್ಯ ಪೊಲೀಸ್ ಇನ್ಸ್‌ಪೆಕ್ಟರ್ ಆಗುವ ಅವನ ಕನಸಿಗೆ ತಣ್ಣಿರೆಚಿದೆ. ಶಶಾಂಕ್ ಮಾರಕ ರೋಗದಿಂದ ಬಳಲುತ್ತಿದ್ದು. ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಶಾಂಕ್ ಕನಸನ್ನು ಪೊಲೀಸ್ ಇಲಾಖೆ ನನಸು ಮಾಡಿದೆ. ಆತನ ಕೊನೆಯ ಆಸೆಯಂತೆ ವಿವಿ ಪುರಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಳ್ಳುವ ಮೂಲಕ ಬಾಲಕ ಶಶಾಂಕ್‌ನ ಆಸೆ ಈಡೇರಿದೆ. ಸುಮಾರು ಒಂದು ಗಂಟೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಶಶಾಂಕ್ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
ಬಾಲಕನ ಆಸೆಯಂತೆ ವಿವಿಪುರಂ ಠಾಣೆ ಇನ್ಸ್‌ಪೆಕ್ಟರ್ ಟಿ.ಡಿ. ರಾಜು ಬಾಲಕ ಶಶಾಂಕ್‌ನನ್ನ ಇನ್ಸ್‌ಪೆಕ್ಟರ್ ಚೇರ್ನಲ್ಲಿ ಕುರಿಸಿ ಪೊಲೀಸ್ ಕ್ಯಾಪ್, ನಕಲಿ ಗನ್, ವಾಕಿ ಟಾಕಿ ನೀಡಿದರು.









