ರಾಮನಗರಕ್ಕೂ ಫಿಲ್ಮ್ ಸಿಟಿಗೂ ಏನ್ ಸಂಬಂಧ ಗೊತ್ತಾ?

0
189

ಫೈಲ್ ಫೋಟೋ:

ಬೆಂಗಳೂರು:ಶೋಲೆಯಂತಾ ಸಿನೆಮಾ ಶೂಟಿಂಗ್ ಆಗಿದ್ದು ರಾಮನಗರದಲ್ಲಿ ಹೊರತು ಬಿಜಾಪುರದಲ್ಲೋ ಬಾಗಲಕೋಟೆಯಲ್ಲೋ ಅಲ್ಲ ಹಾಗಾಗಿ ರಾಮನಗರದಲ್ಲಿ ಫಿಲ್ಮ್ ಸಿಟಿ ಆರಂಭಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡ್ರು.

ವಿಧಾನಸಭೆ ಕಲಾಪದಲ್ಲಿ ರಾಮನಗರಕ್ಕೂ ಫಿಲ್ಮಸಿಟಿಗೂ ಏನು ಸಂಬಂಧ ರಾಮನಗರಕ್ಕೆ ಏಕೆ ಫಿಲ್ಮ್ ಸಿಟಿ ಎಂದು ಬಿಜೆಪಿ ಸದಸ್ಯ ಮಾಧುಸ್ವಾಮಿ ಕೇಳಿದ ಪ್ರಶ್ನೆಗೆ ಸಚಿವ ಡಿಕೆಶಿ ಉತ್ತರಿಸಿದ್ರು.ಶೋಲೆಯಂತಾ ಸಿನೆಮಾ ಶೂಟಿಂಗ್ ಆಗಿದ್ದು ರಾಮನಗರದಲ್ಲಿ ಹೊರತು ಬಿಜಾಪುರದಲ್ಲೋ ಬಾಗಲಕೋಟೆಯಲ್ಲೋ ಅಲ್ಲ.ಸಿನೆಮಾ ಮಾಡೋರು ಅಲ್ಲಿಗೆ ಯಾರು ಬರುತ್ತಾರೆ.ಹಾಗಾಗಿ ರಾಮನಗರದಲ್ಲಿ ಫಿಲ್ಮ್ ಸಿಟಿ ಮಾಡುವುದರಿಂದ ಚಿತ್ರೋದ್ಯಮಕ್ಕೆ ಅನುಕೂಲವಾಗುತ್ತದೆ ಎಂದು ಸಮರ್ಥಿಸಿಕೊಂಡ್ರು.

ವಿಜಯಪುರಕ್ಕೆ ಮಹಿಳಾ ಯೂನಿವರ್ಸಿಟಿ,ತೋಟಗಾರಿಕಾ ಯೂನಿವರ್ಸಿಟಿ ಎಲ್ಲವನ್ನೂ ಕೊಟ್ಟಿದ್ದೇನೆ ಎನ್ನುವ ಡಿಕೆಶಿ ಹೇಳಿಕೆಗೆ ಗೋವಿಂದ ಕಾರಜೋಳ‌ ಆಕ್ಷೇಪ ವ್ಯಕ್ತಪಡಿಸಿದರು. ಡಾ.ರಾಜ್ ಕುಮಾರ್ ಗೆ ನಾಟಕ ಕಲೆ ಕಲಿಸಿದವರು ವಿಜಯಪುರದವರು.ಕಲೆ ಸಂಸ್ಕೃತಿ ಉಳಿವಿಗೆ ಕೊಡುಗೆ ಕೊಟ್ಟಿರುವವರು ಉತ್ತರ ಕರ್ನಾಟಕದವರೇ ಹೊರತು ನೀವಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಸಿ.ಟಿ ರವಿ ಅತಿ ಹೆಚ್ಚು ಸಿನೆಮಾ ಶೂಟಿಂಗ್ ಗೆ ಬರೋದು ಚಿಕ್ಕಮಗಳೂರು ಕೊಡಗಿಗೆ.ಹಾಗಾಗಿ ಫಿಲ್ಮ್ ಸಿಟಿ ಅಲ್ಲಿಗೆ ಕೊಡಬೇಕಿತ್ತು ಎಂದು ವಾದಿಸಿದರು.

ವಿರೋಧ ಪಕ್ಷದ ಸದಸ್ಯರ ವಾದ,ಅಭಿಪ್ರಾಯಗಳನ್ನು ಆಲಿಸಿದ ಸಚಿವ ಡಿಕೆ ಶಿವಕುಮಾರ್ ನಮ್ಮ ಸರ್ಕಾರ ಚಿತ್ರರಂಗವನ್ನು‌ ದೃಷ್ಠಿಯಲ್ಲಿಟ್ಟುಕೊಂಡೇ ರಾಮನಗರದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸುತ್ತಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿ ವಾದಕ್ಕೆ ತೆರೆ ಎಳೆದ್ರು.

- Call for authors -

LEAVE A REPLY

Please enter your comment!
Please enter your name here