ನವದೆಹಲಿ: ಗ್ರೂಪ್ ರಚಿಸಿದ ಅಡ್ಮಿನ್ ನನ್ನು ಸಹ ಅಡ್ಮಿನ್ ಗಳು ರಿಮೂವ್ ಮಾಡದ ರೀತಿ ವ್ಯವಸ್ಥೆ ಜಾರಿಗೊಳಿಸಿ ಅಡ್ಮಿನ್ ಗೆ ಪವರ್ ನೀಡಿದ್ದ ವಾಟ್ಸ್ ಆಪ್ ಇದೀಗ ಗ್ರೂಪ್ ಅಡ್ಮಿನ್ ಹೊರತು ಮತ್ಯಾರೂ ಗ್ರೂಪ್ಗೆ ಸಂದೇಶ ಹಾಕದಂತೆ ವ್ಯವಸ್ಥೆ ಅಳವಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.
ಕೆಲವೊಂದು ಗ್ರೂಪ್ ಗಳನ್ನು ಸದಸ್ಯರಿಗೆ ಮಾಹಿತಿ ನೀಡಲು ಮಾತ್ರವೇ ರಚಿಸಲಾಗಿರುತ್ತದೆ.ಅಲ್ಲಿ ಇತರರ ಚರ್ಚೆ ಮಾಹಿತಿ ಹಂಚಿಕೆ ಅಗತ್ಯವಿರುವುದಿಲ್ಲ,ಆದರೂ ಅಲ್ಲಿ ಸದಸ್ಯರು ಅನಗತ್ಯ ವಿಷಯಗಳ ಪೋಸ್ಟ್ ಮಾಡವುದು ಚರ್ಚೆ ಮಾಡುವುದು ಮಾಡುತ್ತಾರೆ,ಇಲ್ಲಿ ಅಡ್ಮಿನ್ ಪದೇ ಪದೇ ಎಚ್ಚರಿಕೆ ನೀಡಬಹುದು ಇಲ್ಲವೇ ಅಂತಹ ವ್ಯಕ್ತಿಗಳನ್ನು ಗ್ರೂಪ್ ನಿಂದ ರಿಮೂವ್ ಮಾಡಬಹುದು.ಆದರೆ ಇದಕ್ಕೂ ಈಗ ವಾಟ್ಸ್ ಆ್ಯಪ್ ಪರಿಹಾರ ನೀಡಿದೆ.ಅದೇ ಅಡ್ಮಿನ್ ಪರಮಾಧಿಕಾರ.
ವಾಟ್ಸ್ಆಪ್ ಗ್ರೂಪ್ಗೆ ಅನವಶ್ಯಕ, ಕಿರಿಕಿರಿ ಉಂಟುಮಾಡುವ ಸಂದೇಶಗಳು ಬರುತ್ತಿವುದನ್ನು ನಿಯಂತ್ರಿಸಲು ವಾಟ್ಸ್ ಆ್ಯಪ್ ಸಂಸ್ಥೆ ಹೊಸ ಫೀಚರ್ ಬಿಡುಗಡೆ ಮಾಡಿದೆ. ಇದನ್ನು ಅಪ್ಡೇಟ್ ಮಾಡಿಕೊಂಡಲ್ಲಿ ಅಡ್ಮಿನ್ಗೆ ಗ್ರೂಪ್ ಮೇಲೆ ಸಂಪೂರ್ಣ ಹಿಡಿತ ಸಾಧ್ಯವಾಗಲಿದೆ. ಅನವಶ್ಯಕ ಸಂದೇಶಗಳನ್ನು ಅಡ್ಮಿನ್ ನಿಯಂತ್ರಿಸಬಹುದು. ಮೂರು ದಿನಗಳ ಹಿಂದೆ ವಾಟ್ಸ್ಆಪ್ ತನ್ನ ಬ್ಲಾಗ್ನಲ್ಲಿ ಈ ಮಾಹಿತಿ ನೀಡಿದೆ.
ಒನ್ಲಿ ಅಡ್ಮಿನ್’ ಫೀಚರ್ ಅಪ್ಡೇಟ್ ಮಾಡಿಕೊಂಡರೆ ಅಡ್ಮಿನ್ ಮಾತ್ರ ಗ್ರೂಪ್ನಲ್ಲಿ ಮೆಸೆಜ್ ಪೋಸ್ಟ್ ಮಾಡಲು ಸಾಧ್ಯ.ಅಡ್ಮಿನ್ ಹೊರತಾಗಿ ಉಳಿದವರು ಯಾವುದೇ ಸಂದೇಶವನ್ನು ಗ್ರೂಪ್ಗೆ ಹಾಕಲು ಸಾಧ್ಯವಾಗುವುದಿಲ್ಲ. ಪ್ರಮುಖ ಸಂದೇಶವಿದ್ದಲ್ಲಿ ಅದನ್ನು ಅಡ್ಮಿನ್ಗೆ ಕಳಿಸಿ, ಆತ ಪೋಸ್ಟ್ ಮಾಡಬೇಕು.ಗ್ರೂಪ್ನಲ್ಲಿ ಒಮ್ಮುಖ ಸಂವಹನ ನಡೆಯುತ್ತದೆ.ಗ್ರೂಪ್ನಲ್ಲಿ ಯಾವುದೇ ವಿಷಯ ಕುರಿತು ಚರ್ಚೆ ನಡೆಸಲು ಸಾಧ್ಯವಾಗುವುದಿಲ್ಲ. ಅಡ್ಮಿನ್ ಯಾವುದನ್ನು ಪೋಸ್ಟ್ ಮಾಡುತ್ತಾನೋ ಸದಸ್ಯರು ಅದನ್ನು ಓದಬೇಕು, ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ.
ಅಪ್ಡೇಟ್ ಹೇಗೆ?
ಗ್ರೂಪ್ ಮೊದಲು ಅಡ್ಮಿನ್ ತಾವು ರಚಿಸಿದ ಗ್ರೂಪ್ ಓಪನ್ ಮಾಡಿಕೊಳ್ಳಬೇಕು,ನಂತರ ಗ್ರೂಪ್ ಇನ್ಪೋ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು ಬಳಿಕ ಗ್ರೂಪ್ ಸೆಟ್ಟಿಂಗ್ ಆಯ್ಕೆ ಮಾಡಿಕೊಂಡು ಸೆಂಡ್ ಮೆಸೆಜ್ ಎಂಬ ಆಪ್ಶನ್ ನಲ್ಲಿಒನ್ಲಿ ಅಡ್ಮಿನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.









