ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಜೆಟ್ ಕುರಿತು ಅವರೇ ವಿಧಾನಸೌಧದಲ್ಲಿ ಉತ್ತರ ನೀಡುತ್ತಾರೆ. ಅದರ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಲಿ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ತಿಳಿಸಿದರು.
ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಬಜೆಟ್ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತದೆ. ಮುಖ್ಯಮಂತ್ರಿಗಳೇ ವಿಧಾನಸೌಧದಲ್ಲಿ ಬಜೆಟ್ ಬಗ್ಗೆ ಉತ್ತರ ಕೊಡ್ತಾರೆ. ನಾನು ಇದರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಲಿ ಎಂದರು.
ಒಕ್ಕಲಿಗರಿಗೆ ಶೇ.32 ರಷ್ಟು ಸಾಲಮನ್ನಾದ ಲಾಭ ಸಿಕ್ಕಿದೆ ಅಂತ ಮಾಧ್ಯಮಗಳಲ್ಲಿ ವರದಿ ಮಾಡಲಾಗ್ತಿದೆ. ಇದನ್ನು ಲೆಕ್ಕ ಹಾಕಿದ್ದು ಯಾರು? ಇದು ಸೆನ್ಸ್ ಲೆಸ್ ವರದಿಗಳು. ಮಂಗಳೂರು, ಬೀದರ್ ನಲ್ಲಿ ಒಕ್ಕಲಿಗರು ಇದ್ದಾರಾ? ಉತ್ತರ ಕರ್ನಾಟಕ ಬಗ್ಗೆ ನನಗೆ ಗೊತ್ತಿದೆ. ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತಬಾಡಬೇಕು. ಬಜೆಟ್ ಚರ್ಚೆ ವೇಳೆ ಸಿಎಂ ಇದಕ್ಕೆ ಉತ್ತರ ಕೊಡುತ್ತಾರೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.









