ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗೈರುಹಾಜರಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆರೋಗ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮಾಜಿ ಪ್ರಧಾನಿ ದೇವೇಗೌಡರು ಮನೆಯಲ್ಲಿ ಯೋಗಾಸನ ಮಾಡದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕಚೇರಿ ಮುಂಭಾಗದಲ್ಲಿ ಯೋಗಾಸನ ಮಾಡಿದರು.ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಯೋಗ ಮಾಡಿದರು.ಆದರೆ ಸಿಎಂ ಕುಮಾರಸ್ವಾಮಿ ಮಾತ್ರ ಏಕೋ ಯೋಗಾಸನದಿಂದ ದೂರ ಉಳಿದರು.ಆರೋಗ್ಯ ಸಮಸ್ಯೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಆದರೂ ಸಿಎಂ ಅನುಪಸ್ಥಿತಿಯಲ್ಲಿಯೇ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮೇಯರ್ ಸಂಪತ್ ರಾಜ್, ಸಭಾಪತಿ ಡಿ.ಹೆಚ್.ಶಂಕಮೂರ್ತಿ,ಸಚಿವರಾದ ಯುಟಿ ಖಾದರ್, ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಯೋಗಭ್ಯಾಸ ಮಾಡಿದರು.ಶ್ವಾಸಗುರು ವನಚಾನಂದ ಸ್ವಾಮೀಜಿ ಪ್ರಾಣಾಯಾಮ, ಧ್ಯಾನದ ಅಭ್ಯಾಸ ಮಾಡಿಸಿದರು. ಸಾವಿರಾರು ಸಂಖ್ಯೆಯ ಯೋಗಾಸಾಕ್ತರು ಭಾಗಿಯಾಗಿ ಯೋಗ ದಿನಕ್ಕೆ ಮೆರುಗು ನೀಡಿದರು.









